ಕೆ.ಜಿ.ಎಫ್: ಬಳುವನಹಳ್ಳಿ ಸರ್ಕಾರಿ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕಿ ರೂಪಕಲಾ ಶಶಿಧರ್
KGF, Kolar | Aug 11, 2025 ಕೆಜಿಎಫ್ ತಾಲೂಕಿನ ಬಳುವನಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ನಿರ್ಮಿಸಿರುವ 03 ಕೊಠಡಿಗಳನ್ನು ಸೋಮವಾರ ಸಂಜೆ 4: 30ರ ಸಮಯದಲ್ಲಿ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕರು,ಗ್ರಾಮಗಳಲ್ಲಿ ಇರುವಂತಹ ಸರ್ಕಾರಿ ಜಾಗವನ್ನು ಸದ್ಬಳಕೆ ಮಾಡಿಕೊಂಡು ಶಾಲೆಯನ್ನು ತೆರೆದರೆ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕಲಿಸಿದ ಪುಣ್ಯವೋ ಸಿಗುತ್ತದೆ ಇದನ್ನು ಬಿಟ್ಟು ಅನಾವಶ್ಯಕವಾಗಿ ಒಳ್ಳೆಯ ಕೆಲಸ ಮಾಡುವವರಿಗೆ ತೊಂದರೆ ಮಾಡುವುದು ಸೂಕ್ತವಲ್ಲ ಎಂದರು.