ಗುಳೇದಗುಡ್ಡ: ನ. 21ರಂದು ತಾಲೂಕು ಮಟ್ಟದ ನಾಟಕಗಳ ಹಾಸ್ಯ ಸನ್ನಿವೇಶ ಸ್ಪರ್ಧೆ ಆಯೋಜನೆ : ಪಟ್ಟಣದಲ್ಲಿ ಕಲಾವಿದ ಶ್ರೀಕಾಂತ ಹುನಗುಂದ ಹೇಳಿಕೆ
ಗುಳೇದಗುಡ್ಡ ಪಟ್ಟಣದಲ್ಲಿ ಕಲಾವಿದರ ಬಳಗ ಹಾಗೂ ಎಸ್ ಎಸ್ ಎಲ್ ಸಿ ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಟಕಗಳ ಹಾಸ್ಯ ಸನ್ನಿವೇಶ ಸ್ಪರ್ಧಿಯನ್ನು ನವೆಂಬರ್ 21ರಂದು ಗುಳೇದಗುಡ್ಡದಲ್ಲಿ ಹಮ್ಮಿಕೊಳ್ಳಲಾಗಿದೆ ತಾಲೂಕು ಮಟ್ಟದ ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಕಲಾವಿದರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕಾರ್ಯಕ್ರಮದ ಸಂಯೋಜಕ ಹಾಗೂ ಕಲಾವಿದ ಶ್ರೀಕಾಂತ್ ಹುನಗುಂದ ತಿಳಿಸಿದ್ದಾರೆ