ಕೈಗಾರಿಕಾ ಪ್ರದೇಶದಲ್ಲಿ ಸಿಎನ್ ಜಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿದ್ದು ಸಾಗರ ನಗರದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದ್ದಂತಾಗಿದೆ. ಸಾಗರ ನಗರದ ಶಿವಮೊಗ್ಗ ರಸ್ತೆಯಲ್ಲಿ ಇರುವ ಕೈಗಾರಿಕಾ ಪ್ರದೇಶದಲ್ಲಿ ಇರುವ ವಿಜಯಕುಮಾರ್ ಎಂಬವರಿಗೆ ಸೇರಿದ ಗ್ಯಾರೇಜ್ ಗೆ ಬಂದಿದ್ದ ಓಮ್ನಿ ಕಾರ್ ಸರಿಪಡಿಸುವ ಕೆಲಸ ಮಾಡುವ ಸಂದರ್ಭದಲ್ಲಿ ಕಾರಿಗೆ ಅಳವಡಿಸಿದ ಸಿಎನ್ ಜಿ ಗ್ಯಾಸ್ ಟ್ಯಾಂಕ್ ಆಕಸ್ಮಿಕವಾಗಿ ಸೋರಿಕೆ ಗೊಂಡಿದ್ದು ಬೆಂಕಿಯ ಜ್ವಾಲೆಗೆ ಓಮ್ನಿ ಕಾರು ಸಂಪೂರ್ಣ ಆಹುತಿಯಾಗಿರುವ ಘಟನೆ ಶನಿವಾರ ಬೆಳಿಗ್ಗೆ 7 ಗಂಟೆಗೆ ನಡೆದಿದೆ. ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಾಗರ ಅಗ್ನಿಶಾಮಕ ದಳ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ನಡೆಯಬೇಕಾಗಿದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.