ಮಂಡ್ಯ: ರೈತನ ಟ್ರ್ಯಾಕ್ಟರ್ ಸೀಜ್, ನಗರದ ಕೋಟಕ್ ಮಹೇಂದ್ರ ಬ್ಯಾಂಕ್ ಗೆ ರೈತರ ಮುತ್ತಿಗೆ
Mandya, Mandya | Oct 27, 2025 ಟ್ರ್ಯಾಕ್ಟರ್ ಸೀಜ್ ಮಾಡಿ ರೈತನ ಮೇಲೆ ಮೈಕ್ರೊ ಫೈನಾನ್ಸ್ ಸಿಬ್ಬಂದಿ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ನಗರದ ಕೋಟಕ್ ಮಹೇಂದ್ರ ಬ್ಯಾಂಕ್ ಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸೋಮವಾರ ಮಂಡ್ಯ ನಗರದ ಆರ್.ಪಿ.ರಸ್ತೆಯಲ್ಲಿರುವ ಕೋಟಕ್ ಮಹೇಂದ್ರ ಬ್ಯಾಂಕ್ ಮ್ಯಾನೇಜರ್ ನ ರೈತರು ತರಾಟೆಗೆ ತೆಗೆದುಕೊಂಡರು. ಮಂಡ್ಯ ತಾಲ್ಲೂಕಿನ ಕುರಿಕೊಪ್ಪಲು ಗ್ರಾಮದ ರೈತ ಜೋಗಿಗೌಡ ಎಂಬುವವರಿಗೆ ಸೇರಿದ್ದ ಟ್ರ್ಯಾಕ್ಟರ್ ಸಾಲ ಸಂಬಂಧ ಇಎಂಐ ಕಟ್ಟುವುದು ಒಂದು ದಿನ ತಡವಾಗಿದ್ದಕ್ಕೆ ಬ್ಯಾಂಕ್ ಸಿಬ್ಬಂದಿಗಳು ಟ್ರ್ಯಾಕ್ಟರ್ ಸೀಜ್ ಮಾಡಿದ್ದಾರೆ. ನೋಟಿಸ್ ಕೊಡದೆ ಏಕಾಏಕಿ ರೈತನಿಲ್ಲದ ಸಮಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಟ್ರ್ಯಾಕ್ಟರ್ ಸೀಜ್ ಮಾಡಿದ್ದಾರೆ ಎಂದು ಆರೋಪಿಸಿದರು.