ರಾಯಚೂರು: ಕೊರ್ವಿಹಾಳ ರೈತರ ಮೋಟಾರು ಪಂಪ್ಸೆಟ್ಗಳ ಪತ್ತೆ,2 ಆರೋಪಿಗಳ ಬಂಧನ
ಕೊರ್ವಿಹಾಳ ಗ್ರಾಮದ ನರಸಿಂಗ ಮನೆಯ ಮುಂದೆ ರಿಪೇರಿಗೆ ಇಟ್ಟಿದ್ದ 1,10,000 ಬೆಲೆ ಬಾಳುವ 5 ಹೆಚ್.ಪಿ ಯ 2 ಮೋಟಾರ್ ಪಂಪ್ಸೆಟ್ಗಳು ಮತ್ತು 7.5ಹೆಚ್.ಪಿ.ಯ 1 ಮೋಟಾರು ಪಂಪ್ಸೆಟ್ಗಳನ್ನು, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದ ಹಿನ್ನಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ಆರಂಬಿಸಿದ ಪೊಲೀಸರು, ತೆಲಂಗಾಣದ ಇಬ್ಬರು ಆರೋಪಿಗಳಾದ ವಿಜಯಕುಮಾರ್, ಜಿ.ಆದಿಗೌಡ ರನ್ನು ಪೊಲೀಸರು ಬಂಧಿಸಿ, ಒಂದು ಕಾರು, ಪಂಪ್ಸೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.