ಗುಳೇದಗುಡ್ಡ: ಸಾಲುಮರದ ತಿಮ್ಮಕ್ಕ ಪರಿಸರಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ : ಪಟ್ಟಣದಲ್ಲಿ ಅಶೋಕ್ ಹೆಗಡೆ ಬಣ್ಣನೆ
ಗುಳೇದಗುಡ್ಡ ಪಟ್ಟಣದ ರಾಟಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಶಾಲೆಯ ಛೇರ್ಮನ್ನರಾದ ಅಶೋಕ್ ಹೆಗಡೆ ಅವರು ಮಾತನಾಡಿ ಪರಿಸರದ ಸಂರಕ್ಷಣೆ ಗಿಡಮರಗಳ ಬೆಳವಣಿಗೆಗೆ ಸಾಲ ಮರದ ತಿಮ್ಮಕ್ಕ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಅವರು ಬಣ್ಣಿಸಿದರು