ಬಾಗಲಕೋಟೆ: ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಬೆಂಕಿ ಅವಘಡ ಪ್ರಕರಣ,ಕಿಡಿಗೇಡಿಗಳ ವಿರುದ್ಧ ಎಫ್.ಐ.ಆರ್, ನಗರದಲ್ಲಿ ಎಸ್ಪಿ ಸಿದ್ಧಾರ್ಥ ಗೋಯಲ್
ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳ ವಿರುದ್ಧ ಮೂರು ಪ್ರತ್ಯೇಕ ಎಫ್.ಐ.ಆರ್ ದಾಖಲಾಗಿದೆ ಎಂಸು ಎಸ್ಪಿ ಸಿದ್ಧಾರ್ಥ ಗೋಯಲ್ ಅವರು ತಿಳಿಸಿದ್ದಾರೆ.ನಗರದಲ್ಲಿ ಮಾತನಾಡಿರುವ ಅವರು,ಘಟನಾವಳಿಯನ್ನ ವೀಡಿಯೋ ಮಾಡಲಾಗಿದೆ,ನಮ್ಮ ಕಡೆ ವೀಡಿಯೋ ರೆಕಾರ್ಡಿಂಗ್ಸ್ ಇವೆ,ಸೋಸಿಯಲ್ ಮೀಡಿಯಾ ದಲ್ಲೂ ವೀಡಿಯೋಸ್ ಇವೆ..ಎಲ್ಲಾ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದೇವೆ.ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.