ದೊಡ್ಡ ಉಳ್ಳಾರ್ಥಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನಾ ಭಾಗ್ಯ ಕಾಣದೇ ವಿಳಂಭವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶನಿವಾರ ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗದಲ್ಲಿ ಡಿಎಚ್ಓ ಡಾ.ರೇಣುಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು ದೊಡ್ಡ ಉಳ್ಳಾರ್ಥಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲಾಗಿದೆ. ಇದೀಗ ಸಮುದಾಯ ಆರೋಗ್ಯ ಕೇಂದ್ರವಾಗಿದೆ. ಸುಸಜ್ಜಿತ ಕಟ್ಟಡ ಕೂಡಾ ನಿರ್ಮಾಣವಾಗಿದ್ದು ತಜ್ಞ ವೈಧ್ಯರ ನೇಮಕ ಮಾಡಬೇಕಿದೆ. ತಜ್ಞ ವೈಧ್ಯರ ನೇಮಕಾತಿ ಸಧ್ಯದಲ್ಲೇ ನಡೆಸಲಾಗುತ್ತದೆ. ಅಲ್ಲದೆ ಸ್ಥಳೀಯ ಶಾಸಕರ ದಿನಾಂಕ ನಿಗದಿ ಕೂಡಾ ಆಗಬೇಕಿದೆ. ಈ ಕುರಿತು ಶಾಸಕರ ಜೊತೆ ಮಾತುಕತೆ ನಡೆದಲಾಗಿದೆ. ಆದಷ್ಟು ಶೀಘ್ರದಲ್ಲೇ ಆಸ್ಪತ್ರೆ ಉದ್ಘಾಟನೆ ಮಾಡಲಾಗುತ್ತದೆ ಎಂದರು