ಕಲಬುರಗಿ : ಎನ್‌ಈಕೆಆರ್‌ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಬಿರಾಳ ಹಿಸ್ಸಾ ಕ್ರಾಸ್ ಬಳಿ ಜ10 ರಂದು ಸಂಜೆ 6 ಗಂಟೆಗೆ ಸಂಭವಿಸಿದೆ.. ಆಲಮೇಲ ಗ್ರಾಮದ 28 ವರ್ಷದ ಯುವರಾಜ್ ಭಾಗಣ್ಣ ಮೃತ ದುದೈವಿಯಾಗಿದ್ದಾರೆ.. ಇನ್ನೂ ಸಾರಿಗೆ ಸಂಸ್ಥೆ ಬಸ್ ಶಹಾಪುರದಿಂದ ಸಿಂದಗಿ ಕಡೆ ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ.. ಈ ಬಗ್ಗೆ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..