ಕರ್ನಾಟಕ ರಕ್ಷಣಾ ವೇದಿಕೆ ಸಿರವಾರ ತಾಲೂಕು ಘಟಕದಿಂದ ಮಂಗಳವಾರ 11 ಗಂಟೆಗೆ ಸಿರವಾರ ಪಟ್ಟಣದ ಮುಖ್ಯ ರಸ್ತೆಯ ಧೂಳು ಮುಕ್ತ ಮಾಡಲು ಅರೆಬೆತ್ತಲೆ ಹೋರಾಟ ಮಾಡಲಾಯಿತು. ಅವೈಜ್ಞಾನಿಕ ರಸ್ತೆಯಿಂದ ಅಂಗಡಿಗಳ ಮಾಲೀಕರು ಹಾಗೂ ಜನಸಾಮಾನ್ಯರಿಗೆ ಧೂಳಿನಿಂದ ಆಗುತ್ತಿರುವ ತೊಂದರೆಗಳನ್ನು ಸರ್ಕಾರದ ಗಮನಕ್ಕೆ ತಂದು ಧೂಳು ಮುಕ್ತ ಮಾಡಲು ದೇವದುರ್ಗ ಕ್ರಾಸ್ ನಿಂದ ತಹಸೀಲ್ದಾರ್ ಕಚೇರಿ ವರಗೆ ಪ್ರತಿಭಟನೆ ಮೇರವಣಿಗೆ ಮಾಡಿ, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದರು.