ಚಳ್ಳಕೆರೆ:- ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ರುಕ್ಮಿಣಿ ದೇವರ ಆರನೇ ವರ್ಷದ ದಿಂಡಿ ಉತ್ಸವ ಅದ್ದೂರಿಯಾಗಿ ನಡೆಯಿತು. ಉತ್ಸವದ ನಿಮಿತ್ತವಾಗಿ ಕುಂಭ ಪೂಜೆ ಮತ್ತು ಪೋತಿಸ್ಥಾಪನೆ ಪ್ರವಚನ ನಡೆಸಲಾಯಿತು, ಕೀರ್ತನೆ ನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರ ಸಮ್ಮುಖದಲ್ಲಿ ಪಾಳಿ ಭಜನೆ ಹಾಗೂ ಕೀಲು ಕುದುರೆ ನೃತ್ಯ ಗಮನ ಸೆಳೆಯಿತು, ಬೆಳಗಿನ 4:30ರಿಂದ 5:30ರವರೆಗೆ ಕಾಕಡ ಆರತಿ ಹಾಗೂ ಬೆಳಗ್ಗೆ 6 ಗಂಟೆಯಿಂದ ಎಂಟು ಗಂಟೆವರೆಗೂ ಗಂಗಾ ಪೂಜೆ ಮತ್ತು ಗ್ರಾಮ ಪ್ರದಕ್ಷಿಣೆ ನಡೆಯಿತು.ನಂತರ ಕಾಲ ಕೀರ್ತನ ಹಾಗೂ ಮಹಾಪ್ರಸಾದ ನಂತರ ಮಹಾಮಂಗಳಾರತಿ ನಡೆಯಿತು.