ಮೊಳಕಾಲ್ಮುರು: ರಾಂಪುರ ಗ್ರಾಮದ ಗ್ಯಾರೇಜ್ ನಲ್ಲಿ ಬಾಲ ಕಾರ್ಮಿಕ ಪತ್ತೆ, ಪ್ರಕರಣ ದಾಖಲು
ಇಂದು ದಿನಾಂಕ 12.12.2025 ರಂದು ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986 ರ ಅಡಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ತಹಶೀಲ್ದಾರರಾದ ಶ್ರೀಮತಿ ನಾಗವೇಣಿ ರವರ ಅಧ್ಯಕ್ಷತೆಯಲ್ಲಿ ಜರುಗಿದ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಪತ್ತೆ, ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ವಹಿಸಬಹುದಾದ ಕ್ರಮಗಳ ಕುರಿತು ವಿವರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಈ ಬಗ್ಗೆ ಕೈಗೊಳ್ಳಬೇಕಿರುವ ಅವಶ್ಯಕ ಕ್ರಮಗಳ ಬಗ್ಗೆ ಮಾನ್ಯ ತಹಶೀಲ್ದಾರರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ತದನಂತರ ಮಾನ್ಯ ತಹಶೀಲ್ದಾರ್ ರವರ ನಿರ್ದೇಶನದಲ್ಲಿ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ವಿವಿಧ ವಾಣಿಜ್ಯ ಸಂಸ್ಥೆಗಳಿಗೆ ಹಠಾತ್ ದಾಳಿ ನಡೆಸಿದ್ದಾರೆ.