ಕುರುಗೊಡು: ಸಿದ್ದಮನ್ನಳ್ಳಿಯಲ್ಲಿ ಕ್ರಿಮಿನಾಶಕ ಸಿಂಪಡಣೆ ಪರಿಣಾಮ, 2 ಎಕರೆ ಮೆಣಸಿನಕಾಯಿ ಬೆಳೆ ಸುಟ್ಟು ನಾಶ, ಪರಿಹಾರಕ್ಕೆ ಆಗ್ರಹ
ಕುರುಗೋಡು: ಸಮೀಪದ ಸಿದ್ದಮ್ಮನಹಳ್ಳಿ ಗ್ರಾಮದ ರೈತ ಚೆಲುವಾದಿ ಹನುಮಂತಪ್ಪ ಅವರ 2 ಎಕರೆ ಮೆಣಸಿನಕಾಯಿ ಬೆಳೆ ಕ್ರಿಮಿನಾಶಕ ಔಷಧಿ ಸಿಂಪಡಣೆ ಪರಿಣಾಮವಾಗಿ ಸುಟ್ಟು ಸಂಪೂರ್ಣ ನಾಶವಾದ ಘಟನೆ ಇತ್ತಿಚ್ಚಿಗೆ ನಡೆದಿದೆ. ಈಗಾಗಲೇ ಬೆಳೆ ನಾಶದ ಬಗ್ಗೆ ಮಾಹಿತಿ ತಿಳಿದು ತಕ್ಷಣವೇ ಬಳ್ಳಾರಿಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕರ್ ಮತ್ತು ತೋಟಗಾರಿಕೆ ಸಹಾಯಕ ಅಧಿಕಾರಿ ರಾಘವೇಂದ್ರ ಜಮೀನಿಗೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ನ.2ಭಾನುವಾರ ಸಂಜೆ 4ಗಂಟೆಗೆ, ರೈತ ಹನುಮಂತಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ,