ಕಲಬುರಗಿ : ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನ ಪ್ರಾಥಮಿಕ ಆರೋಗ್ಯವನ್ನಾಗಿ ಡಿ ಗ್ರೇಡ್ ಮಾಡಿದ್ದನ್ನ ಖಂಡಿಸಿ ಗಡಿಕೇಶ್ವರ ಗ್ರಾಮಸ್ಥರು ರಸ್ತೆ ಮೇಲೆ ಊಟ ಮಾಡಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ ಘಟನೆ ಡಿ5 ರಂದು ಬೆಳಗ್ಗೆ 11 ಗಂಟೆಗೆ ಸಂಭವಿಸಿದೆ.. ಕಳೆದ 30 ವರ್ಷಗಳಿಂದ ಗಡಿಕೇಶ್ವರ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದು, ಜನರಿಗೆ ಉತ್ತಮ ಚಿಕಿತ್ಸೆ ನೀಡ್ತಿದೆ.. ಪ್ರತಿನಿತ್ಯ 300 ಕ್ಕೂ ಅಧಿಕ ಜನ ಚಿಕಿತ್ಸೆ ಪಡೆಯುತ್ತಾರೆ.. ಇಷ್ಟಿದ್ದರೂ ಸಹ ಸಮುದಾಯ ಆರೋಗ್ಯ ಕೇಂದ್ರವನ್ನ ಡಿ ಗ್ರೇಡ್ ಮಾಡಿರೋದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.