ಮಂಡ್ಯ: 17 ಪ್ರಕರಣದ ರೌಡಿ ವಿರುದ್ದ ಗೂಂಡಾ ಕಾಯ್ದೆಯಡಿ ಬಳ್ಳಾರಿ ಜೈಲಿಗೆ ದಾಖಲು: ನಗರದಲ್ಲಿ ಎಸ್ಪಿ ಮಾಹಿತಿ
Mandya, Mandya | Oct 24, 2025 17 ಪ್ರಕರಣ ದಾಖಲಾಗಿರುವ ರೌಡಿಯೊಬ್ಬನ ವಿರುದ್ದ ಗೂಂಡಾ ಕಾಯ್ದೆ ಅನ್ವಯ ಬಳ್ಳಾರಿ ಜೈಲಿಗೆ ದಾಖಲು ಮಾಡಿರುವುದಾಗಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ. ಈ ಕುರಿತು ಶುಕ್ರವಾರ ನಗರದಲ್ಲಿ ಮಾಹಿತಿ ನೀಡಿರುವ ಅವರು, ನಗರ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿನಗರ ಬಡಾವಣೆ ನಿವಾಸಿ ಅಜಯ @ ಚಿಕ್ಕಬೆಣ್ಣೆ ಬಿನ್ ರಾಮಚಂದ್ರ (31) ಶಿಕ್ಷೆಗೆ ಗುರಿಯಾದವರು. ಈತನ ವಿರುದ್ದ ವಿವಿಧ ಠಾಣೆಗಳಲ್ಲಿ ಗಂಭೀರ ಸ್ವರೂಪದ ಹಲ್ಲೆ , ಕೊಲೆ ಪ್ರಯತ್ನ, ದರೋಡೆ ಯತ್ನ ಸೇರಿದಂತೆ ಒಟ್ಟು 17 ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಈತನ ರೌಡಿ ಚಟುವಟಿಕೆಯನ್ನು ನಿಯಂತ್ರಿಸಲು, ಸಮಾಜದ ಶಾಂತಿ ಮತ್ತು ಸ್ವಾಸ್ಥ್ಯವನ್ನು ಕಾಪಾಡುವ ಸಲುವಾಗಿ ಎಸ್ಪಿ ಅವರ ವರದಿ ಮೇರೆಗೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.