ಶಿವಮೊಗ್ಗ: ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ನಿರ್ಮಿಸಲು ಸಿದ್ದರಾಗಿದ್ದೇವೆ:ನಗರದಲ್ಲಿ ಅಧ್ಯಕ್ಷ ಮೆಹಬೂಬ್ ಭಾಷಾ
ಶಿವಮೊಗ್ಗ ಸಿನಿಮಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡುತ್ತಿದ್ದು, ಈ ಉದ್ದೇಶದಿಂದ ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋವನ್ನು ನಿರ್ಮಾಣ ಮಾಡಲು ನಿಗಮದಿಂದ ರೂಪರೇಷಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಕಂಠೀರವ ಸ್ಟುಡಿಯೋ ನಿಗಮದ ಅಧ್ಯಕ್ಷರಾದ ಮೊಹಬೂಬ್ ಭಾಷಾ ತಿಳಿಸಿದರು.ಭಾನುವಾರ ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಠೀರವ ಸ್ಟುಡಿಯೋವನ್ನು ರಾಜ್ಯ ಮಟ್ಟದಲ್ಲಿ ವಿಸ್ತರಣೆ ಮಾಡುವ ಉದ್ದೇಶವನ್ನು ನಿಗಮ ಹೊಂದಿದ್ದು ಇದಕ್ಕೆ ಜಿಲ್ಲಾ ವಾರುಗಳಲ್ಲಿ ಬಹಳಷ್ಟು ಬೇಡಿಕೆಯು ಸಹ ಇದೆ ಹಾಗಾಗಿ ಶಿವಮೊಗ್ಗದ ಜಿಲ್ಲಾಧಿಕಾರಿಗಳಿಗೆ ಕಂಠೀರವ ಸ್ಟುಡಿಯೋ ನಿರ್ಮಾಣ ಮಾಡಲು ಭೂಮಿ ಕೊಡುವಂತೆ ಮನವಿ ಮಾಡಿದ್ದೇವೆ ಎಂದರು.