ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ರೈತ ಹೋರಾಟಗಾರ ನುಲೇನೂರು ಶಂಕರಪ್ಪ ಹೆಸರಿನಲ್ಲಿ ಹಸಿರು ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಹಿರಿಯ ರೈತ ಮುಖಂಡ ನುಲೇನೂರು ಶಂಕರಪ್ಪ ನಿಧನವಾಗಿ ಎರಡು ವರ್ಷ ಪೂರೈಸಿದ್ದು, ಅವರ ರೈತ ಪರ ಹೋರಾಟ, ನೆನಪಿನಾರ್ಥ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಪ್ರಥಮ ಭಾರಿಗೆ ಕೋಲಾರ ಜಿಲ್ಲೆಯ ಮಹಿಳಾ ಹೋರಾಟಗಾರ್ತಿ ಎಸ್ ವರಲಕ್ಷ್ಮಿ ಅವರನ್ನ ಆಯ್ಕೆ ಮಾಡಿದ್ದು, ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಕಾರ್ಯದ್ಯಕ್ಷ ಲಿಂಗಾರೆಡ್ಡಿ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಭಾಗಿಯಾಗಿದ್ದರು