ಚಳ್ಳಕೆರೆ:-ನಾಯಕನಹಟ್ಟಿ ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯದೈವ ಶ್ರೀ ಆಂಜನೇಯಸ್ವಾಮಿ ಕಾರ್ತಿಕೋತ್ಸವದ ರಥೋತ್ಸವ ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಮಧ್ಯಾಹ್ನ 1. ಗಂಟೆಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ ಹೂವಿನ ಹಾರಗಳಿಂದ ರಥವನ್ನು ಶೃಂಗಾರ ಮಾಡಲಾಯಿತು. ಸಂಜೆ ನಾಲ್ಕು ಗಂಟೆಗೆ ಶ್ರೀ ಅಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಲಾಯಿತು.