ಶಿವಮೊಗ್ಗ: ಸ್ವಂತ ದುಡ್ಡಲ್ಲಿ ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿಗಳು:ನಗರದಲ್ಲಿ ಎಂಬಿಎ ವಿದ್ಯಾರ್ಥಿಗಳ ಕಾರ್ಯಕ್ಕೆ ಶ್ಲಾಘನೆ
ಮೊಬೈಲ್, ಮೋಜು ಮಸ್ತಿಯಲ್ಲಿ ಇತ್ತೀಚಿನ ವಿದ್ಯಾರ್ಥಿಗಳು ತೊಡಗಿರುವಾಗ ಇಲ್ಲೊಂದು ಯುವಕರ ಗುಂಪೊಂದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಎಂಬಿಎ ವ್ಯಾಸಂಗ ಮಾಡುತ್ತಿರುವಂತಹ ಸುನಿಲ್, ತೇಜಸ್, ದೀಪಕ್, ವಾಸು ಹಾಗೂ ಮೇಸ್ತ್ರಿ ನರಸಿಂಹಮೂರ್ತಿಯವರ ಕೆಲಸಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ ಎಂ ಆರ್ ಎಸ್ ನಿಂದ ವಿದ್ಯಾನಗರದವರೆಗೆ ರಸ್ತೆ ಗುಂಡಿಮಯವಾಗಿದೆ. ರಸ್ತೆ ಗುಂಡಿಗಳಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಈ ಹಿನ್ನೆಲೆ ವಿದ್ಯಾರ್ಥಿಗಳು ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿ ಮುಚ್ಚುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಈ ಕುರಿತಾದ ಮಾಹಿತಿ ಭಾನುವಾರ ಲಭ್ಯವಾಗಿದೆ.