ಚಿಕ್ಕಬಳ್ಳಾಪುರ: ಜಮೀನು ವಿವಾದ, ಅರಸನಹಳ್ಳಿಯಲ್ಲಿ ಮೂರು ದಿನಗಳಿಂದ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡದೇ ಅಡ್ಡಿ
ಜಮೀನು ವಿವಾದಕ್ಕೆ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಕಳೆದ ಮೂರು ದಿನಗಳಿಂದ ಕುಟುಂಬಸ್ಥರು ಅಡ್ಡಿಪಡಿಸಿರುವ ಘಟನೆಯೊಂದು ತಾಲೂಕಿನ ಅರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಕೊದಂಡಪ್ಪ ಕಳೆದ ಮೂರು ದಿನಗಳಿಂದೆ ಹೃದಯಾಘಾತದಿಂದ ಮನೆಯಲ್ಲಿ ಸಾವನ್ನಪ್ಪಿದ್ದ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ದತೆ ನಡೆಸಿಕೊಂಡಿದ್ರು.ಆದರೆ ಮೃತ ವ್ಯಕ್ತಿಯ ತಾಯಿ ಹಾಗೂ ತಮ್ಮನ ನಡುವೆನ ಎರಡು ಎಕರೆ ಜಮೀನು ವಿಚಾರವಾಗಿ ತಗಾದೆ ಇದ್ದು ಇದೇ ವಿಚಾರವಾಗಿ ಮೃತ ದೇಹವನ್ನು ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲು ಬಿಡುವುದಿಲ್ಲಾ ಎಂದು ಕುಟುಂವಸ್ಥರ ನಡುವೆ ಗಲಾಟೆ ನಡೆದಿದೆ.