ಚಳ್ಳಕೆರೆ: ನಗರದ ನೆಹರು ವೃತ್ತದಲ್ಲಿ ವಾಹನಗಳ ನಿಯಂತ್ರಣಕ್ಕೆ ಬಿಳಿ ಪಟ್ಟಿ ನಿರ್ಮಾಣ ಕಾರ್ಯಕ್ಕೆ ಚಾಲನೆ
ಚಳ್ಳಕೆರೆ ನಗರದಲ್ಲಿ ವಾಹನಗಳ ನಿಯಂತ್ರಣಕ್ಕೆ ನೆಹರು ವೃತ್ತದದಲ್ಲಿ ವಾಹನ ನಿಲುಗಡೆ ಪಟ್ಟಿ ನಿರ್ಮಾಣ ಕಾರ್ಯಕ್ಕಿಂದು ಚಾಲನೆ ನೀಡಲಾಯಿತು. ಇನ್ನೂ ಗುರುವಾರ ಮಧ್ಯಾಹ್ನ 1 ಗಂಟೆಗೆ ಈ ಒಂದು ದೃಶ್ಯ ಕಂಡು ಬಂದಿದೆ. ಇನ್ನೂ ಚಳ್ಳಕೆರೆ ನಗರದ ಪ್ರಮುಖ ದೂರದ ಊರುಗಳಿಗೆ ಹಾದು ಹೋಗುವ ರಸ್ತೆಗಳನ್ನ ಹೊಂದಿದೆ. ಇದರಿಂದಾಗಿ ಚಳ್ಳಕೆರೆ, ಬಳ್ಳಾರಿ, ಬೆಂಗಳೂರು ಚಿತ್ರದುರ್ಗ ಸಂಪರ್ಕಿಸುವ ನಗರದ ನೆಹರು ವೃತ್ತದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ.