ರಬಕವಿ-ಬನಹಟ್ಟಿ: ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿನ ಬೆಂಕಿ ಪ್ರಕರಣ,ಕಾಶೀಯಾತ್ರೆಯಲ್ಲಿರುವ ರೈತ ಮುಖಂಡನ ಮೇಲೂ ಎಫ್.ಐ.ಆರ್
ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದ ಟ್ರ್ಯಾಕ್ಟರ್ ಗಳಿಗೆ ಬೆಂಕಿ,ಕಲ್ಲುತೂರಾಟ ಪ್ರಕರಣ. ಕಾಶಿಯಾತ್ರೆಯಲ್ಲಿರುವ ರೈತನ ಮೇಲೂ ಎಫ್ ಐ ಆರ್. ಘಟನೆ ದಿನ ಕಾಶಿಯಲ್ಲಿದ್ದ ಮುಧೋಳ ರೈತ ಮುಖಂಡ ಗಂಗಾಧರ ಮೇಟಿ ವಿರುದ್ಧವೂ ಎಫ್ ಐ ಆರ್. ಒಟ್ಟು 17 ರೈತ ಮುಖಂಡರ ಪೈಕಿ 17ನೇ ಆರೋಪಿಯಾಗಿ ಗಂಗಾಧರ್ ಮೇಟಿ ವಿರುದ್ಧ ಎಫ್ ಐ ಆರ್. ತಾನು ಪ್ರವಾಸದಲ್ಲಿರುವ ವಿಡಿಯೋವನ್ನು ದೆಹಲಿ ಇಂಡಿಯಾ ಗೇಟ್ ನಿಂದ ಹರಿಬಿಟ್ಟು ಹೇಳಿಕೆ ನೀಡಿದ ಗಂಗಾಧರ ಮೇಟಿ.ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಏನು ಗಲಾಟೆ ಆಗಿದೆ.ನಾನು ಅಲ್ಲಿರಲಿಲ್ಲ ಕಾಶಿಯಲ್ಲಿದ್ದೆ. ಈಗ ಇಂಡಿಯಾ ಗೇಟ್ ನಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.