ಪರಶುರಾಂಪುರದ ಇಂದಿರಾ ಗಾಂಧಿ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ್ ಬೇಟಿ ನೀಡಿದ್ದಾರೆ. ಎಸ್.ಎಸ್.ಎಲ್.ಸಿ ಗುಣಾತ್ಮಕ ಫಲಿತಾಂಶದಲ್ಲಿ ಜಿಲ್ಲೆಗೆ ರ್ಯಾಂಕ್ ಬರುವಂತೆ ಶ್ರಮಿಸುವಂತೆ ಶಿಕ್ಷಕರಿಗೆ ನಿರ್ದೇಶನ ನೀಡಿದರು. ವಸತಿ ಶಾಲೆ ಮತ್ತು ವಸತಿ ನಿಲಯದ ಪರಿಶೀಲನೆ ನಡೆಸಿ, ಅವರು ಮಾತನಾಡಿದರು. ಶಿಕ್ಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕವಾಗಿ ಸುಧೀರ್ಘ ಚರ್ಚೆ ನಡೆಸಿ, ವಿಶೇಷವಾಗಿ ಎಸ್ಎಸ್ಎಲ್ಸಿ ಮಕ್ಕಳೊಂದಿಗೆ ಎಲ್ಲಾ ವಿಷಯಗಳ ಕುರಿತಾಗಿ ಮಾಹಿತಿ ಪಡೆದರು.