ಇಳಕಲ್ಲ ನಗರದಲ್ಲಿ ಎಸ್.ಎಸ್.ಕೆ. ಸಮಾಜದ ಕುಲಪುರುಷ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯೋತ್ಸವ ಅ.೨೯ ಮುಂಜಾನೆ ೧೧ ಗಂಟೆಗೆ ಬುಧವಾರದಂದು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ಸಮಾಜದ ಬಾಂಧವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ಮಾಡುವ ಮೂಲಕ ಆಚರಿಸಿದರು. ಸಮಾಜದ ಅಧ್ಯಕ್ಷ ಲಕ್ಷö್ಮಣಸಾ ಅರಿಸಿದ್ದಿ, ಉಪಾಧ್ಯಕ್ಷ ಮಾರುತಿಸಾ ಬಸವಾ, ಕಾರ್ಯದರ್ಶಿ ಪ್ರೇಮನಾಥಸಾ ಕಾಟವಾ, ಮುಖಂಡರಾದ ರಾಮಸಾ ಕಾಟವಾ, ಯಲ್ಲುಸಾ ಬಸೂದೆ, ರವಿ ಚವ್ಹಾಣ, ರಾಜಕುಮಾರ ಕಾಟವಾ, ಜಮ್ನಾದಾಸ ಕಾಟವಾ, ನಾಗರಾಜ ನಗರಿ ಸೇರಿದಂತೆ ಸಮಾಜದ ಯುವಕರು ಇದ್ದರು.