ಬಿಸಿಲುನಾಡು ಎಂದೇ ಖ್ಯಾತವಾಗಿರುವ ರಾಯಚೂರು ಜಿಲ್ಲೆಯಲ್ಲಿ ಇದೀಗ ದಾಖಲೆ ಮಟ್ಟದ ಶೀತಕ್ಕೆ ತತ್ತರಿಸಿದೆ. ಶನಿವಾರ 6 ಗಂಟೆಗೆ ಜಿಲ್ಲೆಯಲ್ಲಿ 9 ಡಿಗ್ರಿ ಸೆಲ್ಸಿಯಸ್ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ತಂಪು ಗಾಳಿಗೆ ಜನತೆ ಮನೆ ಬಿಟ್ಟು ಹೊರ ಬಾರದಂತೆ ಮಾಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಚಳಿಯ ಪ್ರಮಾಣ ತೀವ್ರವಾಗಿ ಹೆಚ್ಚಾಗಿದ್ದು, ಮುಂದಿನ ಐದು ದಿನಗಳ ಕಾಲವೂ ಈ ಚಳಿಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.