ಸಿರಗುಪ್ಪ: ಆಟೋ ಕೊಡಿಸುವುದಾಗಿ 5 ಲಕ್ಷ ವಂಚನೆ; ಪ್ರಕರಣ ದಾಖಲು
ಸಿರುಗುಪ್ಪ: ನಗರದ ಅದೋನಿ ರಸ್ತೆಯ ರೇಣುಕಾ ಆಟೋಮೋಬೈಲ್ ಅಂಗಡಿ ಮಾಲೀಕ ಕೆ.ಪಿ. ವಿಜಯ ಅವರಿಗೆ 5 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣ ನ.14,ಶುಕ್ರವಾರ ಸಂಜೆ 4ಕ್ಕೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಬನಶ್ರೀ ನವೀಕರಿಸಬಹುದಾದ ಇಂಧನ ವ್ಯವಸ್ಥೆ ಪ್ರೈ. ಲಿಮಿಟೆಡ್ ಮಾಲೀಕರಾದ ಚಂದ್ರಮೋಹನ್ ಉಮಾಪತಿ ಅವರು, ಬ್ಯಾಟರಿ ರೀಚಾರ್ಜ್ ಮಾಡುವ ನಾಲ್ಕು ಯಂತ್ರಗಳು ಹಾಗೂ ಆಟೋ ರಿಕ್ಷಾ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ವಹಿವಾಟಿಗೆ ಹೊನ್ನಾರಳ್ಳಿಯ ವಿಜಯಕುಮಾರ್ ಬಿ. ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ವಂಚನೆ ಬೆಳ