ಶಿವಮೊಗ್ಗ: ಬಹು ವಾರ್ಷಿಕ ಯೋಜನೆಗಳಿಂದ ಸೈನಿಕ ಕೀಟ ಬಾಧೆ ನಿರ್ವಹಣೆ ಸಾಧ್ಯ, ಶಿವಮೊಗ್ಗದಲ್ಲಿ ವಿಜ್ಞಾನಿ ಡಾ.ಬಿ.ಎಂ.ಪ್ರಸನ್ನ ಸಲಹೆ
ಸೈನಿಕ ಹುಳುಬಾಧೆಯನ್ನು ಸುಸ್ಥಿರವಾಗಿ ನಿಯಂತ್ರಿಸಲು ಸಮಗ್ರ ಕೀಟ ನಿರ್ವಹಣೆ ಪದ್ದತಿ ಮತ್ತು ಬಹುವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಏಷಿಯಾದ ಸಿಐಎಂಎಂವೈಟಿ ವಿಶೇಷ ವಿಜ್ಞಾನಿ ಪ್ರಾದೇಶಿಕ ನಿರ್ದೇಶಕ ಹಾಗೂ ಬೊರ್ಲಾಗ್ ಇನ್ಸ್ಟಿಟ್ಯೂಟ್ ಆಫ್ ಸೌತ್ ಏಷಿಯಾದ ಎಂ.ಡಿ ಡಾ.ಬಿ.ಎಂ.ಪ್ರಸನ್ನ ಸಲಹೆ ನೀಡಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆಗೆ ಏರ್ಪಡಿಸಲಾಗಿದ್ದ ಸೈನಿಕ ಹುಳುವಿನ ಸುಸ್ಥಿರ ನಿಯಂತ್ರಣ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಸೈನಿಕ ಹುಳು ಮೊದಲಿಗೆ ಅಮೇರಿಕಾದಲ್ಲಿ ಕಂಡು ಬಂದಿತು. ನಂತರ 2016 ರಲ್ಲಿ ಆಫ್ರೀಕಾದಲ್ಲಿ ಹೆಚ್ಚಿನ ಬಾಧೆ ನೀಡಿತು.