ಬೀದರ್: ನಗರದಲ್ಲಿ ಜಿಲ್ಲಾ ಪೊಲೀಸರಿಂದ ಡ್ರಗ್ಸ್ ಜಾಗೃತಿ ಓಟಕ್ಕೆ ಎಸ್‌ಪಿ ಚಾಲನೆ
Bidar, Bidar | Mar 10, 2024 ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ನಿಮಿತ್ತ ಡ್ರಗ್ಸ್ ದುಷ್ಪರಿಣಾಮ ತಡೆ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿಯವರು ಚಾಲನೆ ನೀಡಿದರು. ಬೀದರ್ ಕೋಟೆಯಿಂದ ಆರಂಭಗೊಂಡ ಓಟವು ನಗರದ ಪ್ರಮುಖ ಮಾರ್ಗಗಳ ಮೂಲಕ ಬರೀದ್‌ಷಾಹಿ ಉದ್ಯಾನದವರೆಗೆ ನಡೆಯಿತು. ಇದಕ್ಕೂ ಮುನ್ನ ಚನ್ನಬಸವಣ್ಣ ಎಸ್.ಎಲ್. ಮಾತನಾಡಿ, ರಾಜ್ಯ ಪೊಲೀಸ್ ಇಲಾಖೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ, ಇದರ ಅಂಗವಾಗಿ ಡ್ರಗ್ಸ್ ಕುರಿತು ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಜಾಗೃತಿ ಓಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.