ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಸುಕೇಶ್ವರಾಳ ಗ್ರಾಮದಲ್ಲಿ ಬಸ್ ನಿಲ್ದಾಣದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಇದರ ದುರಸ್ತಿಯನ್ನ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಾಕಷ್ಟು ಹಳೇದಾಗಿರುವ ಈ ಒಂದು ಬಸ್ ನಿಲ್ದಾಣದ ಕಟ್ಟಡ ಈಗಾಗಲೇ ಚಾವಣಿ ಉದುರಿ ಬಿದ್ದಿದೆ ಹಾಗಾಗಿ ಇಲ್ಲಿ ಯಾರಾದರೂ ಕುಳಿತ ವೇಳೆ ಕಟ್ಟಡ ಬಿದ್ದು ಏನಾದರೂ ಅನಾಹುತ ಜರುಗಿದರೆ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಮಾತಾಗಿದೆ.