ರಾಯಚೂರು ನಗರದ ಸರ್ವೆ ನಂ. 899/2 ರಲ್ಲಿರುವ 13 ಎಕರೆ ವಿಸ್ತೀರ್ಣದ ಸರಕಾರಿ ಭೂಮಿ ಸಂಬಂಧಿಸಿದ ಆಸ್ತಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಸೋಮವಾರ 11 ಗಂಟೆಗೆ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಮಹೇಂದ್ರ ಕುಮಾರ್ ಮಿತ್ರ ಸರ್ವೆ ನಂ. 899/2 ರಲ್ಲಿನ 13 ಎಕರೆ ಭೂಮಿಯಲ್ಲಿ ರವೀಂದ್ರ ಜಲ್ದಾರ್ ಅವರಿಂದ ಪ್ಲಾಟುಗಳನ್ನು ಖರೀದಿಸಿರುವ ಸಾರ್ವಜನಿಕರು, ಮಾನ್ಯ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ, ಬೆಂಗಳೂರು (LGC(P) 1456/2024) ಇವರ ಅನುಮತಿ ಪಡೆದು ಮಾತ್ರ ಮನೆ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಗಂಭೀರ ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.