ಹಗರಿಬೊಮ್ಮನಹಳ್ಳಿ: ಪಬ್ಲಿಕ್ ಆ್ಯಪ್ ವರದಿಯ ಫಲಶೃತಿ,ಪಟ್ಟಣದ ಸಮುದಾಯ ಭವನದ ಮುಂಭಾಗದಲ್ಲಿ ಚರಂಡಿ ನಿರ್ಮಿಸಲು ಮುಂದಾದ ಪುರಸಭೆ #localissue
ಪಬ್ಲಿಕ್ ಆ್ಯಪ್ ವರದಿಯ ಫಲಶೃತಿ, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿಯ ಸಮುದಾಯ ಭವನದ ಮುಂಭಾಗದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಚರಂಡಿ ನೀರು ರಸ್ತೆಯ ಮೇಲೆ ಹರಿದು ಇಲ್ಲಿನ ಕೆಲ ಮನೆಗಳಿಗೂ ಸಹ ನೀರು, ನುಗ್ಗಿ ಸಮಸ್ಯೆಯಾಗಿತ್ತು ಇದರ ಕುರಿತು ಮೇ 18 ಪಬ್ಲಿಕ್ ಆ್ಯಪ್ ನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ನಿರ್ಮಿಸಬೇಕೆಂದು ಸುದ್ದಿಯನ್ನು ಬಿತ್ತರಿಸಲಾಗಿತ್ತು ನಂತರ ಇಲ್ಲಿನ ಪುರಸಭೆ ಎಚ್ಚೆತ್ತುಕೊಂಡು ಈಗ ಚರಂಡಿ ನಿರ್ಮಿಸಲು ಮುಂದಾಗಿದೆ.