ಗಂಗಾವತಿ: ಐದನೇ ದಿನವೂ ಮುಂದುವರೆದ ಹಳ್ಳದಲ್ಲಿ ನಾಪತ್ತೆಯಾದ ಮಗುವಿನ ಹುಡುಕಾಟ....!
ಗಂಗಾವತಿಯ ಮೆಹಬೂಬ್ ನಗರದ ದುರ್ಗಮ್ಮನ ಹಾಳದಲ್ಲಿ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ, ನಾಲ್ಕು ವರ್ಷದ ಮಗು ಅಜಾನ್ ಗಾಗಿ ಇಂದು ಕೂಡ ಶೋಧಕಾರ್ಯ ಮುಂದುವರೆದಿದೆ. ಮಗು ನಾಪತ್ತೆಯಾಗಿ ಐದು ದಿನ ಕಳೆದರೂ ಇದುವರೆಗೂ ಮಗುವಿನ ಸುಳಿವು ಸಿಗುತ್ತಿಲ್ಲ. ನಿರಂತರವಾಗಿ ರಕ್ಷಣಾ ಸಿಬ್ಬಂದಿಗಳು ದುರ್ಗಮ್ಮನ ಹಳ್ಳದ ಉದ್ದಕ್ಕೂ ಹುಡುಕಾಟ ನಡೆಸಿದ್ದಾರೆ.