ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬುಕ್ಕಸಾಗರ ಬಳಿ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಅವಳಿ ಯುವಕರು ಧಾರುಣವಾಗಿ ಮೃತಪಟ್ಟಿದ್ದಾರೆ. ಮೃತರನ್ನ ಹೊತ್ತರಗೊಂಡನಹಳ್ಳಿ ಗ್ರಾಮದ ಪ್ರದೀಪ್ (23) ಹಾಗೂ ಪ್ರವೀಣ್(23) ಎಂದು ಗುರುತಿಸಲಾಗಿದೆ. ಮೂಲತಃ ಕೃಷಿ ಕಟುಂಬದ ಯುವಕರು ಟ್ರಾಕ್ಟರ್ ಚಾಲಕರಾಗಿದ್ದರು. ಹಸುಗಳಿಗೆ ಬೂಸ ಖರೀದಿಗೆ ಬುಕ್ಕಸಾಗರಕ್ಕೆ ತೆರಳಿದ್ದರು. ರಾತ್ರಿ ಬೂಸ ತುಂಬಿಕೊಂಡು ಊರಿನತ್ತ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದೆ. ಭೀಕರ ಅಪಘಾತದಲ್ಲಿ ಒಡ ಹುಟ್ಟಿದ ಅವಳಿ ಸಹೋದರರು ಸಾವನ್ನಪ್ಪಿದ್ದಾರೆ.