ತುಂಗಭದ್ರಾ ನದಿಯ ಹರಿವಿನ ಉದ್ದಕ್ಕೂ ಯಾವುದೇ ಸ್ಥಳದಲ್ಲಿಯೂ ಚರಂಡಿ ನೀರು ಶುದ್ಧೀಕರಣ (STP) ವ್ಯವಸ್ಥೆ ಇಲ್ಲದಿರುವುದನ್ನು ಗಂಭೀರ ವಿಷಯ ಎಂದು ವಿವರಿಸಿದರು. ಪ್ರಸ್ತುತ ನದಿಗೆ ನೇರವಾಗಿ ಕೊಳಚೆ ನೀರು ಹರಿಯುತ್ತಿರುವುದರಿಂದ ನದಿ ಮಾಲಿನ್ಯ ಹೆಚ್ಚುತ್ತಿದೆ. ಆದರಿಂದ ಪಾದಯಾತ್ರೆ ಮಾಡುವ ಮೂಲಕ ತುಂಗಭದ್ರಾ ನದಿಯನ್ನ ಶುದ್ದಿಕರಿಸಲು ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿ.9, ಮಂಗಳವಾರ ಸಂಜೆ 5ಕ್ಕೆ, ಕಂಪ್ಲಿ ತಾಲೂಕಿನ ಶಾಲಾ-ಕಾಲೇಜು, ಗ್ರಾಮ ಪಂಚಾಯತಿ, ಪೊಲೀಸ್ ಠಾಣೆ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಬಿಡುಗಡೆ ಮಾಡಲಾಯಿತು.