ಕಲಬುರಗಿ : ಕಲಬುರಗಿ ಜಿಲ್ಲೆ ಜೇವರ್ಗಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ವ್ಯಕ್ತಿಯನ್ನ ಬಂಧಿಸಿರೋ ಘಟನೆ ಜ8 ರಂದು ಬೆಳಗ್ಗೆ 11 ಗಂಟೆಗೆ ಸಂಭವಿಸಿದೆ.. ಯಾಳವಾರ ಗ್ರಾಮದ 30 ವರ್ಷದ ಅಶೋಕ್ ಗುತ್ತೇದಾರ್ ಎಂಬಾತ ರಾಜಸ್ಥಾನದಿಂದ ತರಿಸಲಾಗಿದ್ದ ಅಕ್ರಮವಾಗಿ ಪಿಸ್ತೂಲ್‌ನ್ನ ಇಟ್ಟುಕೊಂಡಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಜೇವರ್ಗಿ ಪಿಎಸ್‌ಐ ಗಜಾನಂದ ಬಿರಾದರ್, ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡು ಸ್ನೇಹಿತರ ಮುಂದೆ ಫೋಸ್ ಕೊಟ್ಟಿದ್ದನು.. ಬಂಧಿತನಿಂದ 1 ಪಿಸ್ತೂಲ್, 3 ಜೀವಂತ ಗುಂಡು ಜಪ್ತಿ ಮಾಡಿಕೊಂಡಿದ್ದಾರೆ.