ಶಿಕಾರಿಪುರ: ಎರೆಕೊಪ್ಪ ಗ್ರಾಮದಲ್ಲಿ ಜಮೀನು ತೆರವುಕಾರ್ಯ: ಶಿಕಾರಿಪುರದಲ್ಲಿ ರೈತರ ಪ್ರತಿಭಟನೆ
ಶಿಕಾರಿಪುರ ತಾಲೂಕಿನ ಅಂಬಳಿಗೋಳ ಅರಣ್ಯ ವ್ಯಾಪ್ತಿಯ ಎರೆಕೊಪ್ಪ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಗ್ರಾಮದ ಕಲ್ಲೇಶಪ್ಪ, ಗಿರಿಯಪ್ಪ ಮತ್ತು ಇತರ ರೈತರು ಬಗರ್ ಹುಕುಂ ಸಾಗುವಳಿ ಮಾಡಿದ ಜಮೀನಿಗೆ ಕಂದಕ ತೆಗೆದು ಸಾಗುವಳಿದಾರರನ್ನ ತೆರವುಗೊಳಿಸಲು ಯತ್ನಿಸಿದ್ದಾರೆ.ಇದನ್ನು ವಿರೋಧಿಸಿ ರೈತರು ಶಿಕಾರಿಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆಯನ್ನು ಶನಿವಾರ ನಡೆಸಿದರು ಪ್ರತಿಭಟನಾ ಸ್ಥಳಕ್ಕೆ ಸಂಸದ ಬಿ ವೈ ರಾಘವೇಂದ್ರ ತೆರಳಿ ರೈತರ ಸಮಸ್ಯೆಯಿಂದ ಬಗೆಹರಿಸುವಂತೆ ಅಧಿಕಾರಿಗಳ ಬಳಿ ಚರ್ಚಿಸಿದರು.