ರಬಕವಿ-ಬನಹಟ್ಟಿ: ರನ್ನಬೆಳಗಲಿಯಲ್ಲಿ ಪಿ.ಕೆ.ಪಿ.ಎಸ್ ಚುನಾವಣೆ ವೇಳೆ ಗಲಾಟೆ,ಲಘು ಲಾಠಿ ಪ್ರಹಾರ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ಪಿಕೆಪಿಎಸ್)ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ. ಚುನಾವಣೆ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ.ಬಟ್ಟೆ ಹರಿಯುವ ರೀತಿ ಹೊಡೆದಾಡಿಕೊಂಡ ಕಾರ್ಯಕರ್ತರು. ರನ್ನಬೆಳಗಲಿ ಗ್ರಾಮದಲ್ಲಿ ಅಕ್ಟೋಬರ್ ೨೯ ರಂದು ನಡೆದ ಘಟನೆ.ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಡಿದಾಟದ ವಿಡಿಯೊ.ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ರನ್ನಬೆಳಗಲಿ.ಕೈ ಕೈ ಮಿಲಾಯಿಸಿ ಹೊಡೆದಾಡೋದಲ್ಲದೆ, ಕಟ್ಟಿಗೆ ಕೋಲಿನಿಂದ ಬಡಿದಾಡಿಕೊಂಡ ಜನರು. ಪಿಕೆಪಿಎಸ್ ಕಚೇರಿ ಮುಂದೆಯೇ ಮಾರಾಮಾರಿ. ಕಾರ್ಯಕರ್ತರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ.