ನಗರದ ಬಸವಮಂಟಪದಲ್ಲಿ ಶುಕ್ರವಾರ ಮಹಾಶಿವರಾತ್ರಿ ನಿಮಿತ್ತ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ರಾಷ್ಟ್ರಿಯ ಬಸವದಳ ಲಿಂಗಾಯತ ಸಮಾಜದ ವತಿಯಿಂದ ಸದ್ಗುರು ಸತ್ಯಾದೇವಿ ಮಾತಾಜೀ ನೇತೃತ್ವದಲ್ಲಿ ಇಷ್ಟಲಿಂಗ ಪೂಜೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಶರಣ ಶರಣಿಯರು ಭಾಗಿಯಾಗಿದ್ದರು. ಮಹಾ ಶಿವರಾತ್ರಿ ನಿಮಿತ್ತ ಸಾಮೂಹಿಕವಾಗಿ ಎಲ್ಲರೂ ಇಷ್ಟಲಿಂಗ ಪೂಜೆ, ಬಿಲ್ವಾರ್ಜನೆ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶರಣೆಯರು, ಲಿಂಗಾಯತ ಧರ್ಮದಲ್ಲಿ ಮಹಾಶಿವರಾತ್ರಿ ಪೂಜೆಯನ್ನ ವಿಶೇಷವಾಗಿ ಹಮ್ಮಿಕೊಳ್ಳಲಾಗುತ್ತದೆ. ಮನೆಮನೆಯಲ್ಲಿ ಎಲ್ಲರು ಕುಟುಂಬ ಸಮೇತ ಪೂಜೆ ಮಾಡಿ ಶಿವನ ಆಶಿರ್ವಾದಕ್ಕೆ ಪಾತ್ರವಾಗುತ್ತಾರೆ ಎಂದರು.