ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ತಡೆಯಲು ಸರಕಾರ ಹಲವು ಬಿಗಿ ಕ್ರಮಗಳನ್ನು ತೆಗೆದುಕೊಂಡಿದ್ದರೂ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ನಿಲ್ಲುತ್ತಿಲ್ಲ. ಸೋಮವಾರ ರಜೆ ದಿನ ಇದ್ದರೂ ಸಾಲ ಕಟ್ಟುವಂತೆ ಕಿರುಕುಳ ನೀಡಿದ ಪ್ರಕರಣ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ನಲವಾಗಲು ಗ್ರಾಮದಲ್ಲಿ ನಡೆದಿದೆ. ಹಬ್ಬದ ರಜೆ ಇದ್ದರೂ, ಬ್ಯಾಂಕ್ ರಜೆ ಇದ್ದರೂ ಕ್ಯಾರೆ ಅನ್ನದೆ ಸಾಲ ಕಟ್ಟುವಂತೆ ಕಿರುಕುಳ ನೀಡಿದ್ದಾರೆ. ಸಂಜೆ ಆರು ಗಂಟೆಯಾದರೂ ಮನೆ ಮುಂದೆ ಕುಳಿತು ಸಾಲ ಕಟ್ಟುವಂತೆ ಕಿರುಕುಳ ನೀಡಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಮೈಕ್ರೋ ಪೈನಾನ್ಸ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮಗೆ ಸಾಲ ಕಟ್ಟಲು ಅವಕಾಶ ಕೊಡಿ ಅಂತಾ ಸಾಲ ಪಡೆದ ಗ್ರಾಮದ ಮಹಿಳೆಯರು ಕೇಳಿಕೊಂಡಿದ್ದಾರೆ. ಆದರೂ ಮೈಕ್ರೋ ಫೈನ