ರಾಯಚೂರು ನಗರ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ವೀರೇಶ್ ಅವರು ರಾಯಚೂರು ನಗರದಲ್ಲಿ ಭಾನುವಾರ ಹತ್ತು ಗಂಟೆಗೆ ನಗರದ ವಿವಿಧ ವೃತ್ತಗಳಲ್ಲಿ ಮತ್ತು ಕೇಂದ್ರ ಬಸ್ ನಿಲ್ದಾಣದ ಮುಂದೆ ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಜಾಗೃತಿ ಮೂಡಿಸಿದರು. ಪೊಲೀಸರು ಹೆಲ್ಮೆಟ್ ಧರಿಸಲು ಸೂಚನೆ ನೀಡುವುದು ನಮಗಾಗಿ ಅಲ್ಲ, ನಿಮ್ಮ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ನೀವು ಹೆಲ್ಮೆಟ್ ಧರಿಸಿದೆ ಹೋದರೆ ನಿಮ್ಮ ಕುಟುಂಬಕ್ಕೆ ನಷ್ಟವಾಗುತ್ತದೆ ಹೊರತು ಯಾರಿಗೂ ಅಲ್ಲ. ಹಾಗಾಗಿ ನಿಮ್ಮ ಜೀವ ಅಮೂಲ್ಯವಾದದ್ದು ಎಲ್ಲರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು, ಇಲ್ಲವಾದಲ್ಲಿ ದಂಡ ಪ್ರಕ್ರಿಯೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.