ಸಂಡೂರು: ಸಿಪಿಐ ಮಹೇಶಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಟ್ಟಣದಲ್ಲಿ ಬಿಜೆಪಿ ಮುಖಂಡರು ಒತ್ತಾಯ
Sandur, Ballari | Nov 17, 2025 ಬಳ್ಳಾರಿ ಜಿಲ್ಲೆಯ ಕೋಳುರು ಗ್ರಾಮದ ಯುವಕ ವಿವೇಕಗೌಡನು ಸಚಿವ ಸಂತೋಷ್ ಲಾಡ್ ಅವರನ್ನು ವೈಯಕ್ತಿಕ ವಿಚಾರಕ್ಕೆ ಭೇಟಿ ಮಾಡಲು ತೆರಳಿದಾಗ ಸಂಡೂರಿನ ಸಿಪಿಐ ಮಹೇಶಗೌಡ ಅವರು ಈ ಯುವಕನಿಗೆ ಭೇಟಿ ಮಾಡಲು ಬಿಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಗುಂಡಾವರ್ತನೆ ಮಾಡಿ ಯುವಕನ ಮೇಲೆ ದೈಹಿಕ ಹಲ್ಲೆ ನಡೆಸಿ ಎಡಗೈಗೆ ಗಾಯಮಾಡಿರುತ್ತಾರೆ. ನೊಂದ ಯುವಕನು ಸಿಪಿಐ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸರ್ಕಾರದ ಗೃಹ ಸಚಿವರಿಗೆ, ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಪೊಲೀಸ್ ಇಲಾಖೆಯವರು ತಕ್ಷಣ ಸಿಪಿಐ ವಿರುದ್ಧ ತನಿಖೆ ಕೈಗೊಂಡು, ಪ್ರಕರಣ ದಾಖಲಿಸಿ ಅಮಾನತ್ತು ಗೊಳಿಸಿ ಯುವಕನಿಗೆ ಸೂಕ್ತ ನ್ಯಾಯ ಒದಗಿಸಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಎಸ್ಪಿ ಡಿವಟಿ ಕಚ