ಹಾವೇರಿ ಜಿಲ್ಲೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬದ ಪ್ರಯುಕ್ತ ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಯುಗಾದಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಅದರಲ್ಲೂ ರೈತಾಪಿ ವರ್ಗದ ಜನರು ಎತ್ತಿನಬಂಡಿಗಳ ಮೆರವಣಿಗೆ ಮಾಡಿ ಸಂಭ್ರಮಿಸಿದರು. ರೈತರು ಮಧ್ಯಾಹ್ನದಿಂದಲೆ ತಮ್ಮ ತಮ್ಮ ಮನೆಗಳಲ್ಲಿನ ಎತ್ತುಗಳ ಮೈದೊಳೆದು ಎತ್ತುಗಳನ್ನು ಸಿಂಗಾರ ಮಾಡಿದ್ದರು. ಎತ್ತುಗಳ ಕೋಡುಗಳಿಗೆ ರಿಬ್ಬನ್ ಕಟ್ಟಿ, ಎತ್ತುಗಳ ಮೈಮೇಲೆ ಜೂಲಾ ಹಾಕಿ ಎತ್ತುಗಳನ್ನು ಭರ್ಜರಿಯಾಗಿ ಅಲಂಕಾರ ಮಾಡಿದ್ದರು. ನಂತರ ಗ್ರಾಮದಲ್ಲಿ ಎತ್ತಿನಬಂಡಿಗಳ ಮೆರವಣಿಗೆ ಮಾಡಲಾಯಿತು. ಗ್ರಾಮದ ಬಹುತೇಕ ರೈತರು ಬಂಡಿಗಳಿಗೆ ಎತ್ತುಗಳನ್ನು ಕಟ್ಟಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಭಾನುವಾರ ರಾತ್ರಿ ಏಳೂವರೆ ಗಂಟೆಯಿಂದ ಒಂಬತ್ತು ಗಂ