ಕೋಲಾರ: ನಗರಾಧ್ಯಂತ ಕಡೆಯ ಶ್ರಾವಣ ಶನಿವಾರದ ಸಂಭ್ರಮ:ಶನೈಶ್ಚರಸ್ವಾಮಿ ಮತ್ತು ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ
Kolar, Kolar | Aug 16, 2025 ಕೋಲಾರ ನಗರದ ವಿವಿದೆಡೆ ಶ್ರಾವಣ ಮಾಸದ ಕಡೆಯ ಶನಿವಾರದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.ಸರ್ವಜ್ಞ ಪಾರ್ಕ್ ಬಳಿ ಇರುವ ಶನೈಶ್ಚರಸ್ವಾಮಿ , ಅಮ್ಮವಾರುಪೇಟೆಯ ಪುರಾಣ ಪ್ರಸಿದ್ಧ, ರಾಮಾನುಜಚಾರ್ಯರು ಸ್ಥಾಪಿಸಿದ ಭೂದೇವಿ, ಮಹಾಲಕ್ಷ್ಮಿ ಸಮೇತ ಶ್ರೀ ವರದರಾಜ ಸ್ವಾಮಿ , ದೊಡ್ಡಪೇಟೆಯಲ್ಲಿನ ಶ್ರೀ ಪೇಟೆ ವೆಂಕಟರಮಣ ಸ್ವಾಮಿ, ಕೋಟೆ ಬಾಗಿಲು ಆಂಜನೇಯ ಸ್ವಾಮಿ ಹಾಗೂ ಎಪಿಎಂಸಿ ಮಾರುಕಟ್ಟೆ ಬಳಿ ಇರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.