ಚಿತ್ರದುರ್ಗ: ಸಿರಿಗೆರೆ ಗ್ರಾಮದಲ್ಲಿ ಶಾಲಾ ಮಕ್ಕಳ ಓಡಾಟದ ವೇಳೆಯೆ ಗಣಿ ಲಾರಿಗಳ ಓಡಾಟ, ವೀಡಿಯೋ ವೈರಲ್
ಶಾಲಾ ಮಕ್ಕಳು ಓಡಾಡುವ ಸಮಯದಲ್ಲೆ ಸಿರಿಗೆರೆ ಗ್ರಾಮದಲ್ಲಿ ಗಣಿ ಲಾರಿಗಳು ಓಡಾಟ ನಡೆಸುತ್ತಿದ್ದು ವೀಡಿಯೋ ವೈರಲ್ ಆಗಿದೆ. ಇನ್ನೂ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ಶನಿವಾರ ಬೆಳಗ್ಗೆ 11 ಗಂಟೆಗೆ ಈ ಸಂಬಂದ ವೀಡಿಯೋ ಲಭ್ಯವಾಗಿದೆ. ಇನ್ನೂ ಸಿರಿಗೆರೆ ಗ್ರಾಮದಲ್ಲಿ ಗಣಿ ಲಾರಿಗಳ ಓಡಾಟದಿಂದ ಸಾರ್ವಜನಿಕರು ಹೈರಾಣಾಗಿದ್ದು ರಸ್ತೆಗಳು ಕುಸಿಯುತ್ತಿದ್ದು ಲಾರಿಗಳಿಂದ ಬರುವ ದೂಳಿನಿಂದ ರೋಗ ರುಜುನೆಗಳು ಹೆಚ್ಚಾಗುತ್ತಿವೆ.