ಪ್ರೇಮಿಗಳಾಪುರ ಮಾತನಾಡಿದ್ದಕ್ಕೆ ಮಾರಕಸ್ತ್ರದಿಂದ ಇರಿದು ಇಬ್ಬರನ್ನ ಹತ್ಯೆ ಮಾಡಿರುವಾಗ ಘಟನೆ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೈ ಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ ಕೊಲೆಯಾದ ಇಬ್ಬರನ್ನ ಕಿರಣ್(25) ಹಾಗೂ ಮಂಜುನಾಥ್(65) ಎಂದು ಗುರುತಿಸಲಾಗಿದೆ.ಎರಡು ದಿನದ ಹಿಂದೆ ನಂದೀಶ್ ಹಾಗೂ ಸೃಷ್ಟಿ ಎಂಬುವವರು ನಾಪತ್ತೆಯಾಗಿದ್ದರು ಶುಕ್ರವಾರ ಸಂಜೆ ಪೊಲೀಸ್ ಠಾಣೆಗೆ ಬಂದು ಸೃಷ್ಟಿ ನಂದೀಶ್ ನೊಂದಿಗೆ ಹೋಗುವುದಾಗಿ ಹೇಳಿದ್ದಾರೆ ಇದರಿಂದ ಕೋಪಗೊಂಡ ಸೃಷ್ಟಿಯ ಸಹೋದರ ಹಾಗೂ ಆತನ ಸ್ನೇಹಿತರು ಕೃತ್ಯ ನಡೆಸಿದ್ದಾರೆ ಕಿರಣ್ ಮೇಲೆ ಹಲ್ಲೆ ನಡೆಸಿದಾಗ ಗುಂಪುಗಳ ನಡುವೆ ಜಗಳ ಬಿಡಿಸಲು ಮುಂದಾದ ಮಂಜುನಾಥ್ ಮೇಲು ದಾಳಿ ಮಾಡಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.