ಬೀಳಗಿ: ಪಟ್ಟಣದಲ್ಲಿ ಮತ್ತೆ ಜಿಲ್ಲಾಡಳಿತಕ್ಕೆ ಡೆಡ್ ಲೈನ್ ನೀಡಿದ ಕಬ್ಬು ಬೆಳೆಗಾರ ರೈತರು,ಮುಧೋಳ ಮಾದರಿ ಹೋರಾಟಕ್ಕೆ ತಯಾರಿ
Bilgi, Bagalkot | Nov 18, 2025 ಮತ್ತೆ ಹೊತ್ತಿಕೊಂಡ ಕಬ್ಬಿನ ಯೋಗ್ಯ ಬೆಲೆಯ ಹೋರಾಟದ ಕಿಚ್ಚು.ಜಿಲ್ಲಾಡಳಿತಕ್ಕೆ ಡೆಡೆ ಲೈನ್ ಕೊಟ್ಟ ಕಬ್ಬು ಬೆಳೆಗಾರ ಹೋರಾಟಗಾರರು.ನವೆಂಬರ್ 21.ರ ವರೆಗೆ ಗಡುವು ನೀಡಿದ ರೈತರು.ನವೆಂಬರ್ 21.ರ ಒಳಗಾಗಿ ಎಲ್ಲ ಕಾರ್ಖಾನೆಗಳು ಏಕರೂಪ ದರ ನೀಡಬೇಕು.ಏಕರೂಪ ದರ ನೀಡಲು ಜಿಲ್ಲಾಳಿತ ಆದೇಶಿಸಬೇಕು.ಇಲ್ಲವಾದಲ್ಲಿ ಬೀಳಗಿ ಕ್ರಾಸ್ ನಲ್ಲಿ ಮುಧೋಳ ಮಾದರಿ ಹೋರಾಟ ಆರಂಭ. ಹತ್ತುಸಾವಿರ ರೈತರಿಂದ ಹೋರಾಟ ಆರಂಭಿಸಲಾಗುತ್ತೆ.ಲಾ ಆ್ಯಂಡ್ ಆರ್ಡರ್ ಸಮಸ್ಯೆ ಆದ್ರೆ ಜಿಲ್ಲಾಧಿಕಾರಿಗಳೇ ಹೊಣೆ,ಜಿಲ್ಲಾಡಳಿತವೇ ಹೊಣೆ. ಆದಷ್ಟು ಬೇಗ ಬೇಡಿಕೆ ಈಡೇರಿಸಬೇಕೆಂದು ಎಚ್ಚರಿಕೆ ಕೊಟ್ಟ ರೈತ ಮುಖಂಡ ವೀರಣ್ಣ ಹಂಚಿನಾಳ.