ಗುಂಡ್ಲುಪೇಟೆ: ಬಂಡೀಪುರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಬಂಡೀಪುರ ಕಾಡಿನ ಮದ್ಯ ರಸ್ತೆಯಲ್ಲಿ ಪಲ್ಟಿಯಾದ ಘಟನೆ ಶನಿವಾರ ನಡೆದಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಕೆಕ್ಕನಳ್ಳ ಚೆಕ್ ಪೋಸ್ಟ್ ಸಮೀಪ ಪ್ಲೇವುಡ್ ಶೀಟ್ ತುಂಬಿದ ಲಾರಿಯೊಂದು ತಮಿಳುನಾಡಿಂದ ಕರ್ನಾಟಕದ ಕಡೆ ಪ್ರಯಾಣ ಮಾಡುತ್ತಿದ್ದ ವೇಳೆ ಕಾಡಿನ ಮದ್ಯ ಪಲ್ಟಿಯಾಗಿದೆ.