*ತಾಲೂಕಿನಲ್ಲಿ ಕಾಣಿಸಿಕೊಂಡ ಫಂಗಲ್ ಇನ್ಫೆಕ್ಷನ್* ಮೊಳಕಾಲ್ಮುರು:ತಾಲೂಕಿನ ನಾನಾ ಗ್ರಾಮಗಳಲ್ಲಿ ಜನರಿಗೆ ಫಂಗಲ್ ಇನ್ಫೆಕ್ಷನ್ ಸೋಂಕು ಕಾಣಿಸಿಕೊಂಡಿದೆ.ಮೊದಲಿಗೆ ಕಣ್ಣಿಗೆ ಕಾಣದಷ್ಟು ಚಿಕ್ಕದಾದ ಗುಳ್ಳೆ ಕಾಣಿಸಿಕೊಂಡು ತುರಿಕೆಯ ಕೆರೆತ ಪ್ರಾರಂಭವಾಗಿ ಕೆರೆದಷ್ಟು ಗುಳ್ಳೆಗಳು ದೊಡ್ಡವಾಗುತ್ತವೆ.ಹಗಲಿನ ಬಿಸಿಲಿಗೆ ಕೆರೆತ ಕಮ್ಮಿ ಆದ್ರೆ ರಾತ್ರಿಯ ಸಮಯದಲ್ಲಿ ಕೆರೆತ ಹೆಚ್ಚಾಗುತ್ತದೆ.ರಾತ್ರಿಪೂರ ನಿದ್ರೆ ಇಲ್ಲದೆ ರಕ್ತ ಬರುವವರೆಗೂ ಕೆರೆಯುವಂತಹ ಪರಿಸ್ಥಿತಿ ಎದುರಾಗಿದೆ. ಈ ತುರಿಕೆಯೂ ಅಮುಕುಂದಿ ಗ್ರಾಮದಲ್ಲಿ ಒಬ್ಬರಿಗೆ ಪ್ರಾರಂಭವಾದರೆ ಇಡೀ ಗ್ರಾಮವೇ ಈ ತುರಿಕೆಯ ಪ್ರಭಾವ ಹಾಗು ಪರಿಣಾಮ ಎದುರಿಸಬೇಕಾದ ಪರಿಸ್ಥಿತಿಯಿದೆ.