ರಾಯಚೂರು: ಸುರಂಗ ನೀರು ಹರಿಯುವ ಸಾರ್ಮಥ್ಯ ಹೆಚ್ಚಳಕ್ಕೆ ರೈತ ಮುಖಂಡ ಶಂಕರಗೌಡ ಒತ್ತಾಯ
ತುಂಗಭದ್ರಾ ಎಡೆದಂಡೆ ಕೊನೆಯ ಭಾಗದ ರೈತರಿಗೆ ನೀರು ಹರಿಸಲು ಅಡ್ಡಿಯಾಗಿರುವ ಪಾಪಾಯ್ಯ 2.19 ಸುರಂಗದ ವ್ಯಾಸ ಅಗಲ ಸೇರಿ ನೀರಿನ ಸಾಮರ್ಥ್ಯ ಹೆಚ್ಚಳ ಮಾಡುವ ಮೂಲಕ ರೈತರ ಬೆಳಗಳಿಗೆ ನೀರಿನ ಕೊರತೆ ನಿವಾರಣೆಗೆ ಸರಕಾರ ಕ್ರಮ ವಹಿಸಬೇಕು ಎಂದು ತುಂಗಭದ್ರಾ ಎಡದಂಡ ಕಾಲುವೆ ರೈತ ಮುಖಂಡರಾದ ಹರವಿ ಶಂಕರಗೌಡ ಅವರು ಆಗ್ರಹಿಸಿದರು. ಬುಧವಾರ 11.30 ನಿಮಿಷಕ್ಕೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರೈತರ ಜೀವನಾಡಿ ತುಂಗಭದ್ರಾ ಎಡದಂಡೆ ಕಾಲುವೆಗೆ ಜನವರಿಯಿಂದ ಹರಿಸುವುದಿಲ್ಲ ಎಂದು ರಾಜ್ಯ ಸರಕಾರ ಹೇಳುತ್ತಿರುವುದು ರೈತರು ಆತಂಕಕ್ಕೆ ಗುರಿಯಾಗಿದ್ದಾರೆ ಎಂದರು.