ಹುಲಿ ದಾಳಿ ಪ್ರಕರಣ ಮತ್ತೇ ಮುಂದುವರೆದಿದ್ದು ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ಮಾಡಿದ ವ್ಯಾಘ್ರ ರಕ್ತ ಹೀರಿ ಕೊಂದ ಘಟನೆ ಗುಂಡ್ಲುಪೇಟೆ ತಾಲೂಕಿನ ದೇಪಾಪುರದಲ್ಲಿ ನಡೆದಿದೆ.ದೇಪಾಪುರದ ಗ್ರಾಮದ ಗುರುಮಲ್ಲಪ್ಪ ಎಂಬವರು ಹಸು ಕಳೆದುಕೊಂಡ ರೈತ. ವೀರಭದ್ರಪ್ಪ ಎಂಬವರ ಜಮೀನಿನಲ್ಲಿ ಹಸು ಮೇಯಿಸುವಾಗ ದೈತ್ಯಾಕಾರದ ಹುಲಿ ದಾಳಿ ನಡೆಸಿದ್ದು, ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿದ ಹಿನ್ನಲೆ ಸ್ಥಳದಲ್ಲೇ ಹಸು ಅಸುನೀಗಿದೆ. ಕೂಡಲೇ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.